close
Choose your channels

ರೆಡಿಯಾಗಿ ‘ರಂಗನ್ ಸ್ಟೈಲ್’ ಚಿತ್ರಕ್ಕೆ

Tuesday, March 18, 2014 • Kannada Comments
Listen to article
--:-- / --:--
1x
This is a beta feature and we would love to hear your feedback?
Send us your feedback to audioarticles@vaarta.com

ಹೊಸ ಸ್ಟೈಲ್, ಹೊಸ ನಿರ್ದೇಶಕ, ಹೊಸ ನಿರ್ಮಾಪಕ, ಈಗಾಗಲೇ ಹೆಸರು ಮಾಡಿರುವ ಗಂಗಮ್ಮನ ಸ್ಟೈಲ್...ಹಾಡು ಜೊತೆಗೆ ಸುಂದರ ನಾಯಕ ಪ್ರದೀಪ್, ಸುಂದರ ನಾಯಕಿ ಕನ್ನಿಕಾ ತಿವಾರಿ, ಜೊತೆಗೊಂದು ದೊಡ್ಡ ಸ್ಟಾರ್ ಕಿಚ್ಚ ಸುದೀಪ್ ಅವರ ಮಿಂಚಿನ ಸಂಚಾರ ಈ ‘ರಂಗನ್ ಸ್ಟೈಲ್’ ಚಿತ್ರದಲ್ಲಿ. ಸಕ್ಕತ್ ಮಾಸ್ ಸಿನೆಮಾ ಜೊತೆಗೆ ಒಂದು ಮೆಸೇಜ್ ಸಹ ಇಟ್ಟಿರುವ ‘ರಂಗನ್ ಸ್ಟೈಲ್’ ರಜತ ಪರದೆಯ ಮೇಲೆ ಈ ಶುಕ್ರವಾರ ಇಂದ ರಾರಾಜಿಸಲಿದೆ.

ಆರೆಂಜ್ ಬ್ರದರ್ಸ್ ಅವರ ‘ರಂಗನ ಸ್ಟೈಲ್’ ಚಿತ್ರದಲ್ಲಿ ನಿರ್ದೇಶಕ ಪ್ರಶಾಂತ್ ಹೆಸರಾಂತ ನಿರ್ದೇಶಕ ಎಂ ಡಿ ಶ್ರೀಧರ್ ಅವರ ಶಿಷ್ಯ ಈ ಚಿತ್ರಕ್ಕಾಗಿ ಪ್ರೇಮ ಕಥೆ ಹಾಗೂ ಹಾಸ್ಯವನ್ನು ಬಹು ಮುಖ್ಯವಾಗಿ ಇಟ್ಟುಕೊಂಡಿದ್ದಾರೆ

ಹಿಂದಿ ಭಾಷೆಯ ‘ಕಾಮಿಡೀ ಸರ್ಕಸ್’ ಖ್ಯಾತಿಯ ಭಾರತಿ ಸಿಂಗ್ ಅವರು ಗಂಗಮ್ಮನ್ ಸ್ಟೈಲ್ ಹಾಡಿನಲ್ಲಿ ಕುಣಿದಿದ್ದಾರೆ. ಪ್ರದೀಪ್ ‘ರಂಗನ’ ಪಾತ್ರದಲ್ಲಿ ಇದ್ದಾರೆ, ರಾಣಿಯಾಗಿ ಕನ್ನಿಕಾ ತಿವಾರಿ ಅಭಿನಯಿಸಿದ್ದಾರೆ, ದೀಪಿಕ ದಾಸ್, ಸಾಧು ಕೋಕಿಲ, ರೇಖ ದಾಸ್, ಶರತ್ ಲೋಹಿತಾಶ್ವ, ತಬಲಾ ನಾಣಿ ಹಾಗೂ ಇನ್ನಿತರರು ಇದ್ದಾರೆ.

ಮುರಳಿ, ಗಣೇಶ್ ಮಾಸ್ಟೆರ್, ಬಾಬ್ಬಿ ಲಕ್ಷ್ಮಿ, ತ್ರಿಭುವನ್ ನೃತ್ಯ ನಿರ್ದೇಶರುಗಳು, ಪಿ ಆರ್ ಸೌಂದರ್ ರಾಜ್ ಅವರ ಸಂಕಲನ, ರವಿ ವರ್ಮ ಅವರ ಸಹಾಸ, ಸಿನೆಟೆಕ್ ಸೂರಿ ಅವರ ಛಾಯಾಗ್ರಹಣ, ಮಂಜು ಮಾಂಡವ್ಯ ಅವರ ಸಂಭಾಷಣೆ, ರಾಶಿ ನೀಡನ್ಜಿ ಹಾಗೂ ಎಂ 2 ಕೆ, ಸಹಾಯಕ ನಿರ್ದೇಶಕರು. ಜಯಂತ್ ಕಾಯ್ಕಿಣಿ, ಕವಿರಾಜ್, ವಿಜ್ಞೇಶ್ವರ ರವಿ ಸಾಹಿತ್ಯ ಒದಗಿಸಿದ್ದಾರೆ.

Follow us on Google News and stay updated with the latest!